ಶಾಸಕ ಜಿ.ಎಸ್. ಪಾಟೀಲಗೆ ಸಚಿವ ಸ್ಥಾನ‌ ನೀಡುವಂತೆ ರೋಣದಲ್ಲಿ ಹಕ್ಕೊತ್ತಾಯ

ರೋಣ: ಶಾಸಕ‌ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ‌ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ವತಿಯಿಂದ ಹಕ್ಕೊತ್ತಾಯ ಜಾಥಾ ನಡೆಯಿತು.

ವಿಧಾನಸಭೆ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತು ನವಲಗುಂದ ಮಾತನಾಡಿ, 40 ವರ್ಷಗಳ ಹಿರಿತನ‌ ಪರಿಗಣಿಸಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ‌ ನೀಡಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಯುವ ಕಾಂಗ್ರೆಸ್ ನಾಯಕತ್ವಕ್ಕೆ ಸಾಮೂಜಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.