ಗದಗ: ಗದಗ ನಗರದ ಹೃದಯ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಗದಗ ನಗರದ ಪಂಚಾಕ್ಷರಿ ನಗರದ ಆರನೇಯ ಕ್ರಾಸ್ ಬಳಿ ಪತ್ತೆಯಾಗಿದ್ದು, ಚಿರತೆಯನ್ನು ಕಂಡು ನಾಯಿಗಳು ಬೊಗಿಳಿದ್ದಲ್ಲದೆ ಓಡಿ ಹೋಗಿವೆ.
ನಾಯಿಗಳನ್ನು ಕಂಡ ಚಿರತೆಯು ಪಕ್ಕದ ಉದ್ಯಾನವನದ ಒಳಗಡೆ ಓಡಿ ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದ ಪಂಚಾಕ್ಷರಿ ನಗರ ಹಾಗೂ ಎಪಿಎಂಸಿ ಬಳಿ ಚಿರತೆ ಓಡಾಟ ನಡೆಸುತ್ತಿದ್ದು ಮನೆಯಿಂದ ಹೊರಗೆ ಬರಲು ಜನರು ಭಯ ಪಡುತ್ತಿದ್ದಾರೆ.
ವಿಶೇಷವಾಗಿ, ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಓಡಾಟದ ಭೀತಿಯಲ್ಲಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ತಕ್ಷಣ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
