ಹುಬ್ಬಳ್ಳಿ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯನ್ನು ಹೆದರಿಸಿ, ಆತನ ಬಳಿಯಿದ್ದ 3.2 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕೇರಳ ಮೂಲದ ಚಿನ್ನದ ವ್ಯಾಪಾರಿ ಸುದೀನ್ ಎಂ.ಆರ್. ಅವರನ್ನು ವಿಚಾರಣೆ ನೆಪದಲ್ಲಿ ಐವರ ತಂಡ ಆತನ ಬಳಿಯಿದ್ದ 2 ಕೆಜಿ 942 ಗ್ರಾಂ ಚಿನ್ನದ ಆಭರಣ ಹಾಗೂ 2 ಲಕ್ಷ ನಗದು ದೋಚಿದೆ.
ವ್ಯಾಪಾರಿ ಮಂಗಳೂರಿನಿಂದ ಹುಬ್ಬಳ್ಳಿಗೆ ಬರುವಾರ ಚೈನ್, ನೆಕ್ ಲೆಸ್. ಬ್ರಾಸ್ಲೇಟ್, ಕಿವಿಯೋಲೆ, ಬಳೆ ಸೇರಿ ಒಟ್ಟು 3.2 ಕೋಟಿ ಮೌಲ್ಯದ ಚಿನ್ನದ ಆಭರಣ ತಂದಿದ್ದರು.
ಅವರು ಹುಬ್ಬಳ್ಳಿ, ಧಾರವಾಡ, ಬೆಳಗಾವಿಯ ಹಲವು ಮಳಿಗೆಗಳಿಂದ ಆರ್ಡರ್ ತೆಗೆದುಕೊಂಡಿದ್ದರು. ಅವುಗಳನ್ನು ಕೋಡಲು ಆಗಮಿಸಿದ್ದ ವೇಳೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ತಿಳಿದು, ಅವರ ಮೊಬೈಲ್ ತೆಗೆದುಕೊಂಡು ಯಾಮಾರಿಸಿದ್ದಾರೆ.
ಅಲ್ಲದೆ, ಬೆಳಗಾವಿಯ ಕಿತ್ತೂರು ಬಳಿಯ ಕೆಲಸಗಾರ ವಿವೇಕ್ ನನ್ನು ವಾಹನದಿಂದ ಇಳಿಸಿ, ನಂತರ ಸುದೀನ್ ಅವರನ್ನು ಎಂ.ಕೆ. ಹುಬ್ಬಳ್ಳಿಯ ಸಮೀಪ ಮಾರ್ಗ ಮಧ್ಯೆ ಇಳಿಸಿ, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ
